- ಮೂಲ: ಶ್ವೇತಾ ಮರಾಠೆ
- ಅನುವಾದ: ಸೌಮ್ಯ. ಕೆ.ಆರ್.
ಕಳೆದ ಹಲವಾರು ವರ್ಷಗಳಿಂದ ಕಳೆದ ಎರಡು ದಶಕಗಳಿಂದ, ಸಾರ್ವಜನಿಕ-ಖಾಸಗಿ ಭಾಗೀದಾರಿಕೆಗಳು (PPPಗಳು) ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಸುಧಾರಿಸಲು ಖಾಸಗಿ ವಲಯದ ಸಂಪನ್ಮೂಲ ಮತ್ತು ಪರಿಣಾಮಕಾರಿತ್ವವನ್ನು ಬಳಸಿಕೊಳ್ಳುವ ಚಿಂತನೆಗಳು ರೂಢಿಯಲ್ಲಿದೆ. ನಗರದ ಮಟ್ಟದಲ್ಲಿ ಈ ರೀತಿಯ PPP ಯೋಜನೆಗಳನ್ನು ಘೋಷಿಸುವುದು ಸಾಮಾನ್ಯವಾಗಿದೆ, ಆದರೆ ಮಹಾನಗರ ಪಾಲಿಕೆ ಮಟ್ಟದಲ್ಲಿ ಈ ಭಾಗೀದಾರಿಕೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಲಾಗುತ್ತದೆ? ಮುಖ್ಯ ಪಾತ್ರಧಾರಿಗಳು ಯಾರು? ಜವಬ್ದಾರಿ ಯಾರೂ, ಹೊಣೆಗಾರಿಕೆ ಯಾರದ್ದೂ ಎನೂ ಕೂಡ ಸ್ಪಷ್ಟವಾಗಿಲ್ಲ….
ಸಾಥಿ ಸಂಸ್ಥೆಯು 2023–24 ರಲ್ಲಿ ಮಹಾರಾಷ್ಟ್ರದ ಎರಡು ಪ್ರಮುಖ ನಗರಗಳಲ್ಲಿ ದ್ವಿತೀಯ ಮತ್ತು ತೃತೀಯ ಮಟ್ಟದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಮತ್ತ ಸೇವೆಗಳಿಗೆ ಸಂಬಂಧಿಸಿದ ಸಾರ್ವಜನಿಕ-ಖಾಸಗಿ ಭಾಗೀದಾರಿಕೆಗಳನ್ನು ಅಧ್ಯಯನ ಮಾಡಿತು. ಈ ಅಧ್ಯಯನದಲ್ಲಿ 25 ಆಳವಾದ ಸಂದರ್ಶನಗಳು, ಆಸ್ಪತ್ರೆಗಳ ನಕ್ಷೆ ಬರೆಯುವುದು, ಕೆಲವು ಮಹಾನಗರ ಪಾಲಿಕೆ ಮಟ್ಟದ ಮಾಹಿತಿಗಳು ಮತ್ತು ತಾಂತ್ರಿಕ ದಾಖಲೆ ವಿಮರ್ಶೆಗಳ ಜೊತೆಗೆ ತಾರ್ಕಿಕ ನಿಲುವುಗಳನ್ನು ಸಹಾ ಒಳಗೊಂಡಿದೆ.
ಈ ಅಧ್ಯಯನಕ್ಕೆ ಐದು ಕಥೆಗಳನ್ನ ಉದಾಹರಣೆಯೊಂದಿಗೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೀವಿ. PPP ಎಲ್ಲಿ ವೈಫಲ್ಯಗೊಳ್ಳುತ್ತವೆ ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳ ಮೇಲೆ ಅವುಗಳ ಪರಿಣಾಮಗಳ ಕುರಿತು ಅರ್ಥವಾಗುತ್ತದೆ.
ಘಟನೆ ೧: ಐಸಿಯು ಸೇವೆಗಳ ಹೆಸರಿನಲ್ಲಿ ಸಾರ್ವಜನಿಕ ಹಣದ ನಾಶ!
2011-12ರಲ್ಲಿ, ಒಂದು ಮಹಾನಗರ ಪಾಲಿಕೆ ತೃತೀಯ ದರ್ಜೆ ಆಸ್ಪತ್ರೆಯ ಐಸಿಯು ಸ್ಥಾಪನೆಗೆ ₹55 ಲಕ್ಷ ವೆಚ್ಚಮಾಡಿತು. ಆದರೆ, ಐಸಿಯು ಒಂದು ದಶಕಕ್ಕೂ ಹೆಚ್ಚು ಕಾಲ ಕಾರ್ಯನಿರತವಾಗಲೇ ಇಲ್ಲ. ನಂತರ ಖಾಸಗಿ ಸಂಸ್ಥೆಗೆ 30 ವರ್ಷಗಳ PPP ಅಡಿಯಲ್ಲಿ ನೀಡಲಾಯಿತು—ಆ ಸಂಸ್ಥೆಗೆ ಆರೋಗ್ಯ ಕ್ಷೇತ್ರದಲ್ಲಿ ಯಾವುದೇ ಅನುಭವವಿಲ್ಲ. ಸಾರ್ವಜನಿಕ ಹಣದ ಬಲದಿಂದ ಹೊಸ ಯಂತ್ರೋಪಕರಣಗಳು, ಉಚಿತ ಕಟ್ಟಡ, ವಿದ್ಯುತ್, ನೀರು—ಎಲ್ಲವನ್ನೂ ನೀಡಲಾಯಿತು. ಆದರೆ ಜನರಿಗೆ ಸೇವೆಗಳು ಮಾತ್ರ ಲಭಿಸಲಿಲ್ಲ. ದುಬಾರಿ ಶುಲ್ಕ, ಗುತ್ತಿಗೆ ಆಧಾರದಲ್ಲಿ ವೈದ್ಯರು, ಮತ್ತು ರೆಫರಲ್ ಗಳು ಅರ್ಥಹೀನವಾಯಿತು. ಇದೊಂದು ಸಾರ್ವಜನಿಕ ಸಂಪತ್ತು ಖಾಸಗಿ ಹಿತಾಸಕ್ತಿಗಾಗಿ ಮಾರಿದ ಉದಾಹರಣೆಯಾಗಿದೆ. ರೋಗಿಗಳಿಗೆ ₹40,000 ಕ್ಕಿಂತ ಹೆಚ್ಚು ಠೇವಣಿ ಮತ್ತು ದಿನಕ್ಕೆ ₹4,000–₹5,000 ಕೊಡುವಂತೆ ಆಗುತ್ತಿತ್ತು. ನಂತರ ಆಸ್ಪತ್ರೆ ಆವರಣದಲ್ಲಿಯೇ ಕನಿಷ್ಠ ದರದ ಔಷಧಿಗಳನ್ನು ನೀಡುವ ಜನೌಷಧಿ ಕೇಂದ್ರವಿದ್ದರೂ ಸಹ, ಹಲವು ರೋಗಿಗಳನ್ನು ಐಸಿಯು ಫಾರ್ಮಸಿಯಿಂದ MRP ದರದಲ್ಲಿ ಔಷಧಿಗಳನ್ನು ಖರೀದಿಸಲು ಒತ್ತಡ ಹೇರುವಂತಾಗಿತ್ತು.
ಆರೋಗ್ಯ ಸೇವೆಗಳನ್ನ ಬಲಪಡಿಸಲು, ಸುಧಾರಿಸುವ ಉದ್ದೇಶವಿದ್ದ ಈ ಪಿಪಿಪಿಯು, ತಿಂಗಳಿಗೆ ಸರಾಸರಿ ಕೇವಲ 40 ರೋಗಿಗಳನ್ನು ಮಾತ್ರ ದಾಖಲು ಮಾಡಿತು. ಬಹುತೇಕ ಗಂಭೀರ ಪ್ರಕರಣಗಳನ್ನು ಸಮರ್ಪಕ ಸಿಬ್ಬಂದಿಯ ಕೊರತೆಯಿಂದ ನಗರದ ದೊಡ್ಡ ಸರ್ಕಾರಿ ಆಸ್ಪತ್ರೆಗೆ ರೆಫರ್ ಮಾಡಲಾಗುತ್ತಿತ್ತು — ಇದು ಈ PPPಯ ಮೂಲ ಉದ್ದೇಶವನ್ನೇ ವಿಫಲಗೊಳಿಸಿತು.
ಘಟನೆ ೨: 50 ಕೋಟಿ ರೂ. ಮೌಲ್ಯದ ಆಸ್ಪತ್ರೆಗೆ ಜೀವವಿಲ್ಲ!
2022ರಲ್ಲಿ ₹50 ಕೋಟಿ ವೆಚ್ಚದ ಹೊಸ ಹಲಮಂಜಿಲಿ ಆಸ್ಪತ್ರೆಯನ್ನು ಖಾಸಗಿ ಟ್ರಸ್ಟ್‌ಗೆ ನೀಡಲಾಯಿತು. ಆದರೆ ಇದು ಎರಡು ಬಾರಿ ಉದ್ಘಾಟನೆಗೊಂಡರೂ ಕೂಡ, ಸೇವೆಗಳು ಪ್ರಾರಂಭವಾಗಲೇ ಇಲ್ಲ. ಸುಮಾರು 25,000 ಚದರ ಅಡಿಗಳ ಈ ಆಸ್ಪತ್ರೆಯು ಬಾಡಿಗೆ ಇಲ್ಲದೇ ನೀಡಲಾಯಿತು, ಜೊತೆಗೆ ಉಚಿತ ವಿದ್ಯುತ್ ಮತ್ತು ನೀರು, ತೆರಿಗೆ ವಿನಾಯಿತಿಗಳು ಹಾಗೂ ಹೆಚ್ಚಿನ ಉಪಕರಣಗಳೂ ಒದಗಿಸಲಾಯಿತು ಆದರೂ ಪ್ರಾರಂಭಮಾಡದೇ ಅದಕ್ಕೆ ಅವಶ್ಯಕ ಸೇವೆಗಳಿಲ್ಲದೆ, snakebite ರೋಗಿಯೊಬ್ಬರೂ ಸಾವನ್ನಪ್ಪಿದರು. ಕೆಲವೊಂದು ಸೇವೆಗಳನ್ನು ಇನ್ನೊಂದು ಖಾಸಗಿ ಏಜೆನ್ಸಿಗೆ subcontract ಮಾಡಲಾಗಿದೆ. ವೈದ್ಯರು ಕಡಿಮೆ, ಸಿಬ್ಬಂದಿ ತೀರಾ ಅಲ್ಪ, ಮತ್ತು ಸಾರ್ವಜನಿಕರಿಗೆ ಮಾಹಿತಿ ಇಲ್ಲ. ಇದು ಜವಾಬ್ದಾರಿಯಿಲ್ಲದ PPP ಹೇಗೆ ಜನರ ಜೀವನದೊಂದಿಗೆ ಆಟವಾಡಬಹುದು ಎಂಬುದನ್ನ ಕಾಣಬಹುದಾಗಿದೆ. ಉದಾಹರಣೆಗೆ ವಿಷಹುಳು ಕಡಿತಕ್ಕೆ ಔಷಧ ಲಭ್ಯವಿಲ್ಲದ ಕಾರಣ, ಒಂದು ದುರಂತ ಸಂಭವಿಸಿ ರೋಗಿಯು ಸಾವನ್ನಪ್ಪಿದ ಘಟನೆ ನಡೆಯಿತು.
ಘಟನೆ –೩ PPPಯ ಮೂಲಕ ತಪಾಸಣೆ ಕೇಂದ್ರ – ಯಾವುದೇ ಹೊಣೆಗಾರಿಕೆ ಅಥವಾ ಸಮತೆ ಇಲ್ಲದ ದಕ್ಷತೆ?
ಜನವರಿ 2018ರಲ್ಲಿ ಮಹಾನಗರ ಪಾಲಿಕೆ ಒಂದು ಹೆಣ್ಣುಮಕ್ಕಳ ಆಸ್ಪತ್ರೆಯ ಭೂಮಹಡಿಯನ್ನು ‘AB’ ಡಯಾಗ್ನೋಸ್ಟಿಕ್ಸ್ ಸಂಸ್ಥೆಗೆ ಕೇವಲ ₹1 ಬಾಡಿಗೆಯಲ್ಲಿ ನೀಡಿತು. ಈ ಸಂಸ್ಥೆ MRI, CT ಸ್ಕ್ಯಾನ್ ಸೇರಿದಂತೆ ಹಲವಾರು ಪರೀಕ್ಷೆಗಳನ್ನು ಪ್ರತಿದಿನ ನೂರಾರು ರೋಗಿಗಳಿಗೆ ಒದಗಿಸುತ್ತಿದೆ. ಸಿಬ್ಬಂದಿಯನ್ನು ಖಾಸಗಿ ಸಂಸ್ಥೆಯೇ ನೇಮಿಸಿದರೂ ಈ PPPಯ ಪರಿಣಾಮಕಾರಿತ್ವ ಸ್ಪಷ್ಟವಾಗಿದ್ದರೂ, ಹಲವು ಸಮಸ್ಯೆಗಳು ಕಂಡುಬಂದಿದೆ. ಸ್ಕ್ಯಾನಿಂಗ್ ಸೇವೆಗಳು , ವಿದ್ಯುತ್ , ದರಪಟ್ಟಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿಲ್ಲ, ನಂತರದ ಹೋರಾಟದಿಂದ ಮಾತ್ರ ಜಾರಿಗೆ ಬಂತು. ಇದರಿಂದ ನಾವು ಅರ್ಥ ಮಾಡಿಕೊಳ್ಳಬೇಕಾದ ವಿಚಾರವೆಂದರೆ, ಆಸ್ಪತ್ರೆಯ ಮುಖ್ಯ ಸ್ಥಳವನ್ನು ಖಾಸಗಿ ಸಂಸ್ಥೆಗೆ ನೀಡಿದ ಪರಿಣಾಮ ಸಾರ್ವಜನಿಕ ಸೇವೆಗಳು ಹಿನ್ನಡೆಯಲ್ಲಿವೆ. ಈ PPP ಸೇವೆಗಳ ವಿಸ್ತರಣೆಗೂ ಹೊಣೆಗಾರಿಕೆ ಮತ್ತು ಸಮತೆಯ ಕೊರತೆಯೂ ಸೇರಿಕೊಂಡಿವೆ. ಆರೋಗ್ಯ ಹಕ್ಕುಗಳು ಕೇವಲ ಒಪ್ಪಂದದಲ್ಲೇ ಅಲ್ಲ, ಜಾಗೃತತೆಯ ಅಗತ್ಯವೂ ಇದೆ.
ಘಟನೆ – ೪ ಐಸಿಯು PPPವಿಫಲತೆಯಿಂದಾಗಿ – 149 ಸಾವು
ಇದರ ಹೊಣೆಗಾರಿಕೆ ಈ PPP ವ್ಯವಸ್ಥೆನೇ ಕಾರಣ ಹಾಗೂ 2018 ರಲ್ಲಿ ಮಹಾನಗರ ಪಾಲಿಕೆ ₹8.83 ಕೋಟಿ ಮೊತ್ತದ PPP ಒಪ್ಪಂದವನ್ನು ಒಂದು ಧರ್ಮದತ್ತಿ ಟ್ರಸ್ಟ್ ಜೊತೆ ಒಪ್ಪಂದ ಮಾಡಿಕೊಂಡಿತು. ಉದ್ದೇಶ: ಆರು ಆಸ್ಪತ್ರೆಗಳಲ್ಲಿ ಐಸಿಯು ತಜ್ಞರು ಮತ್ತು ನರ್ಸ್‌ಗಳನ್ನು ಒದಗಿಸುವುದು. ಆದರೆ ಈ ಯೋಜನೆ 2023ರ ವೇಳೆಗೆ ಸಂಪೂರ್ಣವಾಗಿ ಕುಸಿಯಿತು. ಇದರಿಂದಾಗಿ ಬಹಳಷ್ಟು ಸಾವುಗಳು ಎದರಾದವು. ಕೇವಲ 9 ತಿಂಗಳಲ್ಲಿ 140ಕ್ಕೂ ಹೆಚ್ಚು ಐಸಿಯು ಸಾವುಗಳು ವರದಿಯಾದವು. ಒಬ್ಬ BHMS ವೈದ್ಯನು ತಾನೇ ತಜ್ಞನಂತೆ ನಡೆದುಕೊಂಡು, 32 ಸಾವು ಪ್ರಮಾಣಪತ್ರಗಳನ್ನು ಮಿತಿಯಲ್ಲದ ರೀತಿಯಲ್ಲಿ ಹೊರಡಿಸಿದ್ದಾನೆ ಹಾಗೂ ಒಪ್ಪಂದದಲ್ಲಿ ಸಿಬ್ಬಂದಿಯ ಅರ್ಹತೆ ಅಥವಾ ಕೌಶಲ್ಯದ ಬಗ್ಗೆ ಸ್ಪಷ್ಟ ನಿಯಮಗಳು ಇರಲಿಲ್ಲ
ಘಟನೆ–೫ PPPಗಳಲ್ಲಿ ಪುನರಾವೃತ್ತಿ ತಪ್ಪುಗಳು: ಸಾರ್ವಜನಿಕ ಹಿತಕ್ಕೆ ಧಕ್ಕೆಯಾ?
ಮಹಾನಗರ ಪಾಲಿಕೆಯ ಆಸ್ಪತ್ರೆಗಳಲ್ಲಿ ನಡೆದ ಐದು ಪಿಪಿಪಿ ಮಾದರಿ ಘಟನೆಗಳು ವ್ಯವಸ್ಥಾತ್ಮಕ ವೈಫಲ್ಯಗಳ ಅಳವಡಿಕೆಗಳಾಗಿವೆ. ವೈಫಲ್ಯಗಳು ವಿನ್ಯಾಸ ಹಂತದಿಂದ ಅನುಷ್ಠಾನ ಹಾಗೂ ಮೇಲ್ವಿಚಾರಣೆಯವರೆಗೆ ಹರಡಿವೆ. ವಿಶೇಷ ಗಮನಾರ್ಹವಾಗಿ ಗಮನಿಸುವುದಾದರೆ, ಒಂದು ಖಾಸಗಿ ಸಂಸ್ಥೆ, ಅನಧಿಕೃತ ವೈದ್ಯಕೀಯ ಸೇವೆಗಳನ್ನು ಆರಂಭಿಸಿ, ಹೈಕೋರ್ಟ್ ಆದೇಶದ ನಂತರವೂ ₹21.86 ಲಕ್ಷ ತೆರಿಗೆ ಪಾವತಿಸದೆ ಉಳಿದರೂ ಸಹ ಆ ಸಂಸ್ಥೆಗೆ ಮತ್ತೆ 2019ರಲ್ಲಿ ಒಪ್ಪಂದ ನೀಡಲಾಗಿದೆ. ಈ PPPಗಳ ಆಯ್ಕೆ ಪ್ರಕ್ರಿಯೆಯ ಅಪಾರದರ್ಶಕತೆ ಮತ್ತು ಸಾರ್ವಜನಿಕ ಹಿತದ ಬಗ್ಗೆ ಪ್ರಶ್ನೆ ಎತ್ತುತ್ತವೆ.
ಈ ಎಲ್ಲಾ ಮೇಲ್ಕಂಡ ಐದು ಘಟನೆಯಲ್ಲಿಯೂ ಕಂಡುಬಂದ ಸಮಸ್ಯೆಗಳು:
- ವ್ಯಾಪಕವಾಗಿ PPPಅನುಷ್ಠಾನ: ಇಬ್ಬರೂ ಮಹಾನಗರಗಳಲ್ಲಿ PPPಗಳ ಅಳವಡಿಕೆ ವ್ಯಾಪಕವಾಗಿದ್ದು, ಇದರಲ್ಲಿ ಸಾರ್ವಜನಿಕ ಆಸ್ಪತ್ರೆಗಳು ಅಥವಾ ಗರ್ಭಿಣಿಯರ ಗೃಹಗಳನ್ನು ಸಂಪೂರ್ಣವಾಗಿ ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವುದು, ಲ್ಯಾಬೊರೇಟರಿ, ಇಮೇಜಿಂಗ್ ಅಥವಾ ಡಯಾಲಿಸಿಸ್ ಸೇವೆಗಳ ಹೊರಗುತ್ತಿಗೆ (ಔಟ್‌ಸೋರ್ಸಿಂಗ್), ಹಾಗೂ ICUವೈದ್ಯರ ನೇಮಖಾತಿಗೆ ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಸೇರಿವೆ.
- ಕಾರ್ಯಕ್ಷಮತೆ ಇಲ್ಲದ ಅಥವಾ ಕಡಿಮೆಯಾದ PPPಸೌಲಭ್ಯಗಳು: ಭಾರಿ ಸಾರ್ವಜನಿಕ ಹೂಡಿಕೆಗಳಿದ್ದರೂ ಸಹ ಹಲವಾರು PPP ಸೌಲಭ್ಯಗಳು ಕಾರ್ಯನಿರ್ವಹಣೆ ಇಲ್ಲದೆ ಇರುವುದು ಅಥವಾ ಕಡಿಮೆ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದವು
- ಅಧಿಕ ದರ ವಸೂಲಿ:ಈ ಎರಡು ನಗರಗಳಲ್ಲಿನ PPPಆಸ್ಪತ್ರೆಗಳಲ್ಲಿನ ದರಗಳು, ಅದೇ ಸೇವೆಗಳಿಗೆ ಸಾರ್ವಜನಿಕ ಆಸ್ಪತ್ರೆಗಳು ವಿಧಿಸುತ್ತಿರುವ ದರಕ್ಕಿಂತ 2 ರಿಂದ 25 ಪಟ್ಟು ಹೆಚ್ಚು ಇದ್ದವು.
- ಬಡವರಿಗೆ ಉಚಿತ/ಸಬ್ಸಿಡಿ ಸೇವೆಗಳ ಕೊರತೆ:ಉಚಿತ ಅಥವಾ ಸಬ್ಸಿಡಿ ಸೇವೆಗಳು ಬಡ ಗುಂಪುಗಳಿಗೆ ನೀಡಲಾಗುತ್ತಿಲ್ಲ ಅಥವಾ ಅವುಗಳ ಬಗ್ಗೆ ಮಾಹಿತಿ ಸರಿಯಾಗಿ ನೀಡಲಾಗುತ್ತಿಲ್ಲ.
- ಅರ್ಹತೆಯಿಲ್ಲದ ಸಿಬ್ಬಂದಿ ಮತ್ತು ರೋಗಿ ಸುರಕ್ಷತಾ ಉಲ್ಲಂಘನೆಗಳು:ಹಲವಾರು PPPಸಾವುಗಳು ಸೇರಿದಂತೆ, ಅರ್ಹತೆ ಇಲ್ಲದ ಸಿಬ್ಬಂದಿ ಹಾಗೂ ರೋಗಿಗಳ ಸುರಕ್ಷತೆ ಕುರಿತ ಉಲ್ಲಂಘನೆಗಳು ವರದಿಯಾಗಿವೆ.
- ದ್ವಿತೀಯ ಔಟ್‌ಸೋರ್ಸಿಂಗ್ ಮತ್ತು ಮೇಲ್ವಿಚಾರಣೆಯ ಕೊರತೆ:ಖಾಸಗಿ ಒಪ್ಪಂದ ಸಂಸ್ಥೆಯು ಇನ್ನೊಂದು ಏಜೆನ್ಸಿಗೆ ಹೊಣೆಗಾರಿಕೆಗಳನ್ನು ಔಟ್‌ಸೋರ್ಸ್ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಕಾರ್ಯಕ್ಷಮತೆ ಮೇಲ್ವಿಚಾರಣೆಯ ಕೊರತೆ ಇದ್ದು, ಕೆಲ ಒಪ್ಪಂದಗಳಲ್ಲಿ ಯಾವುದೇ ಗುಣಮಟ್ಟದ ಪ್ರಮಾಣಗಳು ಅಥವಾ ಸೇವಾ ವಿವರಗಳೇ ಇಲ್ಲ.
- ಸಂರಚನಾತ್ಮಕ ದೋಷಗಳು:ಲಾಭ ಮಾಡುವ ಖಾಸಗಿ ಸಂಸ್ಥೆಗಳಾಗಲಿ ಅಥವಾ ಸ್ವಯಂಸೇವಾ ಸಂಸ್ಥೆಗಳಾಗಲಿ, ಎಲ್ಲಾ PPP ಒಪ್ಪಂದಗಳಲ್ಲಿಯೂ ಒಂದೇ ರೀತಿಯ ಗಂಭೀರ ಸಂರಚನಾತ್ಮಕ ದೋಷಗಳು ಕಂಡುಬಂದಿವೆ.
- ದುರ್ಬಲ ಮೇಲ್ವಿಚಾರಣೆ ಮತ್ತು ರಾಜಕೀಯ ಹಸ್ತಕ್ಷೇಪ:ಮಹಾನಗರ ಮಟ್ಟದ ಆಸ್ಪತ್ರೆಗಳ PPPಗಳು ದುರ್ಬಲ ಮೇಲ್ವಿಚಾರಣೆ ಮತ್ತು ರಾಜಕೀಯ ಹಸ್ತಕ್ಷೇಪದಿಂದ ಬಳಲುತ್ತಿವೆ. ಸಾರ್ವಜನಿಕ ಸಂಪತ್ತುಗಳು (ಭೂಮಿ, ಕಟ್ಟಡಗಳು, ನೀರು, ವಿದ್ಯುತ್) ಖಾಸಗಿ ಸಂಸ್ಥೆಗಳಿಗೆ ಉದಾರ ಷರತ್ತುಗಳ ಮೇಲೆ ನೀಡಲ್ಪಡುತ್ತಿದ್ದು, ಸಾರ್ವಜನಿಕರಿಗೆ ಆಗುವ ಲಾಭ ಬಹಳವೇ ಕಡಿಮೆಯಾಗಿದೆ.
ಸಾರ್ವಜನಿಕ ಸಂಪತ್ತುಗಳು ಬಡ ಜನರಿಗಾಗಿ ಉಪಯೋಗವಾಗಬೇಕಾಗಿದ್ದರೆ, ಪಾರದರ್ಶಕ, ಸಮಾನ ಹಾಗೂ ಜವಾಬ್ದಾರಿಯುತ ಪಿಪಿಪಿ ಮಾದರಿ ನಿರ್ಮಾಣ ಅಗತ್ಯ ಮತ್ತು ಅವಶ್ಯ..
(This blog is based on a study conducted by SATHI. The study team includes- Shweta Marathe, Deepali Yakkundi, Abhijit More and Dhananjay Kakade. You may see a recently published research paper based on this study – Marathe S, Yakkundi D, More A, Kakade D. Unpacking the politics and publicness of healthcare public-private partnerships: case studies from municipal hospitals in Maharashtra state, India. J Community Syst Health [Internet]. 2025 Jul. 23 [cited 2025 Jul. 30];2(1). Available from:https://journals.ub.umu.se/index.php/jcsh/article/view/1182)